ಮಕ್ಕಳ ಬರಹವನ್ನು ನಿರಂತರವಾಗಿ ಕಂಪ್ಯೂಟರಿನಲ್ಲಿ ಪೋಣಿಸಲು ಕಳೆದ ಹಗಲು-ರಾತ್ರಿಗಳು ನಿಜಕ್ಕೂ ಸಂತಸದ ಕ್ಷಣಗಳು.ಅದಕ್ಕಾಗಿ ತೊಡಗಿಸಿದ ಹಣ , ಶ್ರಮ ಅತ್ಯಂತ ಖುಷಿಯನ್ನು , ವೃತ್ತಿಯಲ್ಲಿ ತೃಪ್ತಿಯನ್ನು #ಮಕ್ಕಳ_ಮಂದಾರ ಪತ್ರಿಕೆ ನಿರಂತರ 12 ವರ್ಷಗಳ ಪಯಣ ಸಾಗಿದ್ದು ಶಾಲಾ ಮಕ್ಕಳ ಬರಹಗಳಿಗೆ ಸುಂದರ ವೇದಿಕೆ ಒದಗಿಸಬೇಕು ಎನ್ನುವ ಉತ್ಸಾಹದ ಕಾರಣದಿಂದ ಹೊರತುಪಡಿಸಿ ಮತ್ತೇನಿಲ್ಲ.
ನನ್ನದೇ ಹಣಕಾಸಿನ ಮಿತಿಯಲ್ಲಿ ಒಂದಿಷ್ಟು ಮುದ್ರಿತ ಪ್ರತಿ ಉಳಿದಂತೆ ಪಿಡಿಎಫ್ ಆವೃತ್ತಿಯಲ್ಲಿ ಸ್ನೇಹಿತರನ್ನು ಶಾಲೆಗಳನ್ನು ಶಿಕ್ಷಕರನ್ನು ತಲುಪುತ್ತಿತ್ತು. ನನ್ನ ಆತ್ಮೀಯ ಹೂಮನಸಿನ ಗೆಳೆಯರು ನನ್ನ ಈ ಕಾರ್ಯಕ್ಕೆ ಪ್ರೋತ್ಸಾಹಿಸಿದ್ದು ಅವರಿಗೆ ಅಭಾರಿ.
ಈಗ ಆತ್ಮೀಯ ಸುಜಯ್ ಲಿಂಗಪ್ಪ ಅವರು ಜೊತೆಯಾಗಿದ್ದು ದೊಡ್ಡ ಶಕ್ತಿಯಾಗಿದೆ. ಅವರೇ ಈ ಬಾರಿ ವಿಶಿಷ್ಟವಾಗಿ ವಿನ್ಯಾಸ ಮಾಡಿದ್ದಾರೆ. ಮತ್ತಷ್ಟು ವಿಶಿಷ್ಟ ವಿನ್ಯಾಸದೊಂದಿಗೆ
ನಿಮ್ಮೆಲ್ಲರ ಮಕ್ಕಳ ಮಂದಾರ ಪತ್ರಿಕೆಯು ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳ ಬರಹಗಳ ಸುಂದರ ವೇದಿಕೆಯಾಗಿ 20 ಪುಟಗಳಲ್ಲಿ ನಿಮ್ಮನ್ನು ತಲುಪಲು ಸಿದ್ಧವಾಗಿದೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪತ್ರಿಕೆಯ ಪಿಡಿಎಫ್ ಆವೃತ್ತಿ ಓದಬಹುದು.
https://drive.google.com/file/d/1dgCAsiK6XrOw-tSXVAhVGXJOPeQewhiU/view?usp=drivesdk